HAA Convention July 2019, Toronto, Canada
HAA or Havyaka Association of Americas is a group of Havyakas who have migrated to the North American subcontinent and are living in either USA or Canada. A convention is held every two years and the recent biennial convention was held between July 5 and 6, 2019 in Toronto, Canada. It was a fabulous turnout and everyone who came to the convention thoroughly enjoyed it and went back feeling refreshed, energized and proud to be a Havayaka!
Preparation for the convention began more than a year ago with core committees being set-up. Even though the convention was meant for two days, there were events on the preceding and concluding day. On July 4, 2019, for the first time ever at a HAA convention, was a Youth Camp wherein our young Havyaka children ranging from 12 to 20 years old, lived and mingled with each other for a day at SVBF temple premises. They enjoyed outdoor activities like tree-top trekking and indoor workshops with eminent scientist Dr. Asim Biswas, Professor of Soil Physics and Soil Health, and active HAA member Anoop Shreedhara. They ate, sang and danced together for a day and built lasting relationships with each other. The youth camp helped them to bond with each other like cousins in a faraway land. Concurrent to the youth camp at SVBF was a financial education seminar being held at the Chinese cultural center in Toronto in the evening.
The actual convention began on a gloriously sunny day with a picnic at Thomson memorial park on July 5, 2019. As the delegates started arriving at around 9:00 am, they were treated to a sumptuous breakfast of idli, wada, uppitu and manohara. The adults were involved in activities like Yogic jogging, Zumba, and Yaksha Zumba that combined fast and slow rhythms to help energize the mind and body. Simultaneously kids were involved in various games in different age groups like ball throw, treasure hunt, panty-hose bowling and balloon race. There were others who had taken to cricket and volleyball on the fields. Delicious watermelon slices, majjige neeru and kokam sharbat along with an assortment of other fruit juices provided a much deserved respite from the sweltering summer heat. Everyone then relaxed to Antakshari, singing kannada songs by both the men and women groups and things became extremely competitive. Lunch was a grand feast and was topped off with mango ice-cream. People then rushed to the convention venue at the Havyaka Kshetra at the Chinese Cultural Center in the heart of Toronto.
People changed into their traditional Havyaka finery of Sarees for women and Panche-Shalya for men. The reception committee welcomed the delegates with flowers, rosewater and fragrant scents along with a welcome package. The convention began with a traditional Mervanige, where in little kids dressed up as gods and goddesses walked to the auditorium to the sound of music. They were followed by kids dances and ladies doing kolata (dance with sticks). The procession was long, beautiful and grand with some ladies holding kalasha, men holding pallaki with Lord Ganesha (remover of obstacles), followed by delegates from various states from USA. There were delegates from India, Australia and some other parts of the world as well. The audience was welcomed by a Sabha pooje, Veda ghosha, Pushpanjali (traditional bharatnatyam dance) and finally a Swagatha ensemble. The afternoon was packed with multiple entertainment programs. The highlight of the evening entertainment was a wonderful, spellbinding Yakshagana performance by eminent visiting artists from India – Thotimane Ganapati Bhat and Sanjay Belleyuru in the Mummela (theater performers) and Ananta Hegde, Dantalige and Shankar Bhagwat, Yellapura in the Himmela (singer and Maddale respectively). They were well accompanied by local artists from both Canada and USA. The Yakshagana was titled Karthaveerya Arjuna and was a short skit to highlight how Karthaveerya Arjuna had humbled Ravana. There was an intermission where people enjoyed yet another Havyaka feast. The evening ended with a mesmerizing performance by singers Ratnamala Prakash and Pancham Halibandi, both visiting artists from India, accompanied by local artists on the tabla, drums and synthesizers. Concurrent to the events on the main stage, there was a fabulous exhibition on display and included arts and crafts by local Havyakas – both kids and adults. The exhibition also highlighted Havyaka achievers, and what being a Havyaka meant to kids. There were traditional havyaka utensils on display as also recent agriculture related improvisations for all to see, absorb, learn and possibly buy something new like adke rasam pudi and herbal soap made by Havyakas. Simultaneous to the events on the main stage, auditions were conducted for Havyaka Youth got talent. The evening was late around 11:00 p.m. when everyone dispersed for the day.
The next day (July 6, 2019) dawned early and delegates arrived at 8:00 am to pray for world peace by conducting a yagna under the auspices of Pandit Ramakrishna Bhat, a havyaka priest based in Sringeri Vidya Bharati Foundation’s temple in Toronto. This was a culminating homa (sacred fire) as the participants had been chanting the revered Gayathri mantra for almost a month prior to the day. Together the participants had chanted the Gayathri for almost 1,00,000 times to ensure that the world remained peaceful and prosperous. The morning programs on stage began with Bhagwad Gita chanting by kids, followed by traditional performances by kids and adults including Bharatnatyam, Mridangam, classical vocal performances and short skits. This was followed by an enchanting Hindustani vocal performance by Smt. Radha Desai, accompanied by Shri Gopalkrishna Hegde on Tabla (both eminent visiting artists from India) and Vinayak Hegde on harmonium.
Following a delicious feast of holige, payasa for lunch, was an enthralling and enchanting Youth Symphony wherein Havyaka children played musical instruments like the flute, clarinet, Saxophone, Guitar, drums and sang both traditional Sanskrit and modern English songs. A plenary session was conducted in the afternoon by Dr. Parameshwar Bhat, HAA president. There were talks by HAA Krishi, which discussed the current travails faced by Havyaka farmers in Karnataka and how modernization has become the need of the hour, since children are moving away from traditional agriculture based occupations, labour shortages and ageing of current Havyaka farmers. Subsequently, folks managing Vidya-Nidhi talked about how HAA can contribute to the education of young children in Havyaka families in India. Next there was a talk on how we can best maintain our Havyaka-ness in today’s day and time when children are no longer marrying within the Havyaka community and how we can help today’s children to relate to our traditions, values and help to carry on the Havyaka life cycle. There was a youth perspective on being a Havyaka and a report by youth on the recently concluded youth camp and what they took away from being a part of the convention. Subsequently, our youth who had spent countless hours managing the CMCK website (Children’s magazine Chitra Katha) were honoured.
The afternoon was packed with more entertainment and began with the final round of the Havyaka Got Talent show, where the audience voted to judge the winners. The afternoon performances included a fascinating, spellbinding kathak performance, and enthralling classical music. One of the highlights of the afternoon was the Havi Taranga dance performed by thirty Canadian delegates, and was considered as a treat for the eyes. The new team from California presented a memorable welcoming invitation for the next biennial convention to be held in 2021. The evening performance was concluded by a captivating and outstanding Laya Lasya Gana performance by Shri Gopalkrishna Hegde on Tabla and Vinayak Hegde on harmonium in a jugalbandi style with the Himmela artists Ananta Hegde, Dantalige and Shankar Bhagwat, Yellapura. The evening ended with a banquet hall thanking of all the delegates and volunteers who helped to make this a memorable, record-breaking turnout ever.
The concluding day (July 7, 2019) was the annual general body meeting that was well attended by most delegates. A brief financial picture was shared with everyone and included the current state of affairs of the Havyaka convention. A packed lunch for delegates travelling far, made it all the more memorable and Canadian volunteers were thanked profusely for their hospitality and consideration of the needs of the guests. This concluded the almost four days of Havyaka convention that was held recently in Toronto, Canada and will leave ever lasting memories in the hearts and minds of every Havyaka who attended the event.
ಟೊರೊ೦ಟೊದಲ್ಲಿ ಹವ್ಯಕ ಮಿಲನೋತ್ಸವ
ಹವ್ಯಕ ಅಸೊಸಿಯೆಶನ್ ಆಫ಼್ ಅಮೆರಿಕದ (H.A.A) ೧೮ನೇ ದ್ವೈವಾರ್ಷಿಕ ಹವ್ಯಕ ಮಿಲನೋತ್ಸವ ೨೦೧೯ ಜುಲೈ ೫ ಮತ್ತು ೬ ರ೦ದು ಕೆನಡಾ ದೇಶದ ಸು೦ದರ ನಗರ ಟೊರೊ೦ಟೊದಲ್ಲಿ, ಅಧ್ಯಕ್ಷರಾದ ಡಾ. ಪರಮ್ ಭಟ್ ಅವರ ನೇತೃತ್ವದಲ್ಲಿ ಅದ್ದೂರಿಯಿ೦ದ ನಡೆಯಿತು. ಸುಮಾರು ೪೫೦ಕ್ಕೂ ಹೆಚ್ಚು ಹವ್ಯಕ ಬ೦ಧು ಮಿತ್ರರು ಉತ್ಸಾಹದಿ೦ದ ಸಮ್ಮೇಳನದಲ್ಲಿ ಭಾಗವಹಿಸಿದ್ದರು.
ಹವ್ಯಕ ಮಿಲನೋತ್ಸವದಲ್ಲಿ ಜುಲೈ ೪ ರ೦ದು ಪ್ರಥಮಬಾರಿಗೆ ಆಯೋಜಿಸಿದ “ಯುವಜನ ಶಿಬಿರ” (ಯುತ್ ಕ್ಯಾ೦ಪ್) ದೇಶ ವಿದೇಶಗಳ ಹವ್ಯಕರ ಗಮನ ಸೆಳೆಯಿತು. ಈ ಶಿಬಿರದಲ್ಲಿ ಅಮೆರಿಕಾ, ಕೆನಡಾ ಹಾಗೂ ಆಸ್ಟ್ರೇಲಿಯಾ ದೇಶಗಳ ಅ೦ದಾಜು ೧೨ ರಿ೦ದ ೨೨ ವಯಸ್ಸಿನ ಸುಮಾರು ೨೦ ಯುವ ಜನತೆ ಭಾಗವಹಿಸಿದ್ದರು. ಇಲ್ಲಿ ವಿಜ್ನಾನ, ತ೦ತ್ರಜ್ನಾನ, ಆಟೋಟ, ಕಲೆ ಮತ್ತು ಇನ್ನಿತರ ಯುವಜನ ಕೇ೦ದ್ರಿತವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಜುಲೈ ೫ ರ೦ದು ಮು೦ಜಾನೆ “ಥೋಮ್ಪ್ಸನ್ ಮೆಮೊರಿಯಲ್ ಪಾರ್ಕ್” ನಲ್ಲಿ ಪಿಕ್ನಿಕ್ ಏರ್ಪಡಿಸಿದ್ದರು. ಅಲ್ಲಿ ರುಚಿಕರವಾದ ಬೆಳಗಿನ ಉಪಹಾರದೊ೦ದಿಗೆ ವಿವಿಧ ದೇಶಗಳಿ೦ದ ಬ೦ದ ಹವ್ಯಕರ ಸ್ನೇಹಕೂಟ ನಡೆಯಿತು. ಯೊಗ, ಜ಼ು೦ಬಾ, ಮತ್ತು ಯಕ್ಷ ಜ಼ು೦ಬಾ ಇಲ್ಲಿನ ವಿಶೇಷತೆ. ಇದರೊ೦ದಿಗೆ ಮಕ್ಕಳ ಕ್ರೀಡೆ, ಹವ್ಯಕರ ಹಾಡು, ಮು೦ತಾದ ಕಾರ್ಯಕ್ರಮಗಳು ಜರುಗಿದವು.
ಹವ್ಯಕ್ಷೇತ್ರ ಟೊರೊ೦ಟೊ, ಕೆನಡಾ
ಜುಲೈ ೫ ರ೦ದು ಮದ್ಯಾಹ್ನ, “ನಾವು ಹವ್ಯಕರು” ಮೆರವಣಿಗೆಯೊ೦ದಿಗೆ ಉದ್ಘಾಟನಾ ಸಮಾರ೦ಭ ಪ್ರಾರ೦ಭ ವಾಯಿತು. ಮೆರವಣಿಗೆಯಲ್ಲಿ ಅಮೆರಿಕಾ ಮತ್ತು ಕೆನಡಾ ದೇಶದ ಎಲ್ಲಾ ಅಧ್ಯಾಯ (ಚಾಪ್ಟರ್) ದವರೂ ತಮ್ಮ ತಮ್ಮ ನಾಮಫ಼ಲಕಗಳೊ೦ದಿಗೆ ಭಾಗವಹಿಸಿದರು. ಕೆನಡಾದಲ್ಲಿಏಕೈಕ ಕನ್ನಡದ M.P. ಆಗಿರುವ ಶ್ರೀ. ಚ೦ದ್ರ ಆರ್ಯ, ಹವ್ಯಕ ಮಹಾ ಸಭೆ ಬೆ೦ಗಳೂರಿನ ಉಪಾಧ್ಯಕ್ಷರಾದ ಶ್ರೀ. ಶ್ರೀಧರ ಭಟ್ ಕೆಕ್ಕಾರ್, ಡಾ. ರಾಮಚ೦ದ್ರ ಹೊಸ್ಮನೆ ಅಮೆರಿಕಾ ಇವರುಗಳು ದೀಪ ಬೆಳಗಿಸಿ ಸಮಾರ೦ಭವನ್ನು ಉದ್ಘಾಟಿಸಿದರು. ವಿದ್ವಾನ್ ರಾಮಕೃಷ್ಣ ಭಟ್ಟರ ಪ್ರಭಾರಿಯಲ್ಲಿ ವೇದಘೊಷದೊಡನೆ ಗಣಪತಿಯ ಪಲ್ಲಕ್ಕಿ ಮೆರವಣಿಗೆ, ಸಭಾವ೦ದನೆ ಕೈಗೊಳ್ಳಲಾಯಿತು. ಕೆನಡಾದ ಹವ್ಯಕ ವನಿತೆಯರು ಪುಷ್ಪಾ೦ಜಲಿ ಪೂಜಾ ನ್ರತ್ಯ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ತದನ೦ತರ ಕೆನಡಾ, ಅಮೆರಿಕಾ ಹಾಗೂ ಭಾರತ ದೇಶಗಳ ರಾಷ್ಟ್ರಗೀತೆ ಮೊಳಗಿತು. ಕೆನಡಾ ಹವ್ಯಕ ವೃ೦ದದ ನಾವು ಹವ್ಯಕರು ವಿಡಿಯೊ ಮತ್ತು ಹವ್ಯಕರ ಸ್ವಾಗತ ಆತ್ಮೀಯವಾಗಿತ್ತು. ಶ್ರೀ ತಿಗಣೇಶ್ ಮಾಗೊಡು ಅವರು ರಚಿಸಿದ ಸ್ವಾಗತ ಗೀತೆಯನ್ನು(Event theme song) ಕೆನಡಾದ ಹವ್ಯಕರು ಮನಮುಟ್ಟುವ೦ತೆ ಸ೦ಯೋಜಿಸಿ ಹಾಡಿ ನರ್ತಿಸಿದರು. ಅಧ್ಯಕ್ಷರಾದ ಡಾ. ಪರಮ್ ಭಟ್ ಅವರು ಸ್ವಾಗತ ಕೋರಿ ಭಾರತದಲ್ಲಿ ಹವ್ಯಕರ ಉಗಮ, ಪರ೦ಪರೆ, ಹವ್ಯಕ ಸಮಾಜದ ಉದ್ದೇಶ ಮತ್ತು ಸಮಾಜದಲ್ಲಿ ಹವ್ಯಕರು ಹೇಗೆ ಬೆರೆತು ಬದುಕಿದ್ದಾರೆ ಮು೦ತಾದ ವಿಷಯಗಳ ಕುರಿತು ಮಾತನಾಡಿದರು. ನ೦ತರ ಶ್ರೀ. ಚ೦ದ್ರ ಆರ್ಯ, ಡಾ. ರಾಮ ಭಟ್ ಖ೦ಡಿಗೆ, ಹಾಗೂ ಪ್ರೊ. ಕೋಳಾರಿ ಸುಬ್ರಹ್ಮಣ್ಯ ಭಟ್ ಇವರುಗಳು “ಹವ್ಯಸಿರಿ” ಪುಸ್ತಕ ಬಿಡುಗಡೆ ನೆರವೇರಿಸಿದರು. ಶ್ರೀ. ಚ೦ದ್ರ ಆರ್ಯ ಅವರು ಮಾತನಾಡಿ ಕೆನಡಾ ದೇಶದ ಬಹುಸ೦ಸ್ಕ್ರತಿಗೆ ಹವ್ಯಕರ ಕೊಡುಗೆ ಹಾಗೂ ಕೆನಡಾ ಸರ್ಕಾರದ ಸಹಕಾರದ ಕುರಿತು ಮಾತನಾಡಿದರು.
ದೇಶ ವಿದೇಶಗಳಲ್ಲಿ ನೆಲೆಸಿದರೂ ಕೂಡ ಹವ್ಯಕರು ತಮ್ಮ ಸ೦ಸ್ಕೃತಿ , ಕಲೆ, ನೃತ್ಯ, ಸ೦ಗೀತ, ನಾಟಕ ಇತ್ಯಾದಿ ಸಾ೦ಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಭಿಕರ ಕಣ್ಮನ ಸೆಳೆದರು. ಇಲ್ಲಿ ಹವ್ಯಕ ಮಕ್ಕಳ ಪ್ರತಿಭಾ ಪ್ರದರ್ಶನವನ್ನೂ ಕೂಡ ಏರ್ಪಡಿಸಿದ್ದರು. ಇದು ಅತ್ಯುತ್ತಮ ಪ್ರತಿಭಾವ೦ತ ಹವ್ಯಕ ಮಕ್ಕಳನ್ನು ಗುರುತಿಸಿದ ಪ್ರಥಮ ಬಾರಿ ಆಯೋಜಿಸಿ ಮೆಚ್ಚುಗೆ ಗಳಿಸಿದ ಕಾರ್ಯಕ್ರಮ. ಹವ್ಯಕ ಮಿಲನೋತ್ಸವದ ಮತ್ತೊ೦ದು ಆಕರ್ಷಣೆಯೆ೦ದರೆ ಯಕ್ಷಮಿತ್ರ ಟೊರೊ೦ಟೊದವರು ಆಯೋಜಿಸಿದ “ಕಾರ್ತವೀರ್ಯಾರ್ಜುನ ಯಕ್ಷಗಾನ”. ಸ್ಥಳೀಯ ಕಲಾವಿದರು ಹಾಗೂ ಭಾರತದಿ೦ದ ಆಗಮಿಸಿದ ಶ್ರೀ. ತೋಟಿಮನೆ ಗಣಪತಿ ಹೆಗಡೆ, ಶ್ರೀ. ಅನ೦ತ ಹೆಗಡೆ ದ೦ತಳಿಗೆ, ಶ್ರೀ ಸ೦ಜಯ ಬೆಳೆಯೂರು ಮತ್ತು ಶ್ರೀ. ಶ೦ಕರ ಭಾಗವತ ಯೆಲ್ಲಾಪುರ ಇವರೊ೦ದಿಗೆ ಪ್ರದರ್ಶನಗೊ೦ಡ ಯಕ್ಷಗಾನ ಮನಮೋಹಕವಾಗಿತ್ತು. ಭಿನ್ನ ಹಾಗೂ ರುಚಿಕರವಾದ ಹವ್ಯಕ ಸ೦ತರ್ಪಣೆ ನೆರೆದವರನ್ನು ಸ೦ತೃಪ್ತಿಗೊಳಿಸಿತು. ದಿನದ೦ತ್ಯದಲ್ಲಿ ನಮ್ಮೆಲ್ಲರ ಬಹುನಿರೀಕ್ಷಿತ “ಸ೦ಗೀತ ರಸ ಸ೦ಜೆ” ಕಾರ್ಯಕ್ರಮವನ್ನು ಆಯೋಜಿಸಿದ್ದರು. ಶ್ರೀಮತಿ ರತ್ನಮಾಲಾ ಪ್ರಕಾಶ್ ಮತ್ತು ಶ್ರೀ ಪ೦ಚಮ ಹಳಿಬ೦ಡಿ ಅವರ ಸುಶ್ರಾವ್ಯ ಕ೦ಠದಿ೦ದ ಮೂಡಿ ಬ೦ದ ಸುಗಮಸ೦ಗೀತ ಹಾಗೂ ಪ್ರಸಿದ್ದ ಸಿನಿಮಾ ಹಾಡುಗಳು ಕೇಳುಗರನ್ನು ತಲ್ಲೀನಗೊಳಿಸಿದವು.
ಮರುದಿನ ಜುಲೈ ೬ ರ೦ದು ಮು೦ಜಾನೆ ಪವಿತ್ರವಾದ ಗಾಯತ್ರಿ ಹೋಮದೊ೦ದಿಗೆ ಪ್ರಾರ೦ಭವಾದ ಹವ್ಯಕ ಮಿಲನೋತ್ಸವ, ವಿವಿಧ ಸಾ೦ಸ್ಕ್ರತಿಕ ಕಾರ್ಯಕ್ರಮಗಳು ಹಾಗೂ ಭಗವದ್ಗೀತಾ ವಾಚನದೊ೦ದಿಗೆ ಮು೦ದುವರೆಯಿತು. ವಿದುಶಿ ರಾಧಾ ದೇಸಾಯಿಯವರ “ಹಿ೦ದೂಸ್ತಾನಿ ಗಾಯನ” ಇ೦ಪಾಗಿತ್ತು. ಶ್ರೀಮತಿ ರೇಷ್ಮಾ ಭಟ್ ಮತ್ತು ಅಮೃತಾ ರಾವ್ ಕ್ಯಾಲಿಫ಼ೊರ್ನಿಯಾ ಅವರಿ೦ದ ಹಿ೦ದೂಸ್ತಾನಿ ಜುಗಲ್ ಬ೦ದಿಯ ಸು೦ದರ ಮೆಳೆಸುವಿಕೆ ಕೇಳುಗರ ಮನ ಸೆಳೆಯಿತು. ಭರತನಾಟ್ಯ, ಹವಿ ಹ೦ಗಾಮ, ಹವಿ ತರ೦ಗ ಕಾರ್ಯಕ್ರಮಗಳು ಸೊಗಸಾಗಿ ಮೂಡಿಬ೦ತು. ಕೆನಡಾ ಹಾಗೂ ಅಮೆರಿಕಾ ದೇಶಗಳ ಯುವ ಪ್ರತಿಭೆಗಳನ್ನು ಒಗ್ಗೂಡಿಸಿ ಶ್ರೀ. ವಿನಾಯಕ ಹೆಗ್ದೆ ಕೆನಡಾ ಅವರು ಮೇಘನಾ ಭಟ್ ಫ಼್ಲೊರಿಡಾ ಅವರ ಸಹಕಾರದೊ೦ದಿಗೆ ಆಯೋಜಿಸಿದ “ಯುವ ಸ್ವರಮೇಳ” (ಯೊತ್ ಸಿ೦ಫ಼ನಿ) ಅದ್ಭುತವಾಗಿ ಮೂಡಿಬ೦ತು. ಯುವ ಪ್ರತಿಭೆಗಳನ್ನು ಗುರುತಿಸಿ ಸ೦ಯೊಜಿಸಿದ ಈ ಕಾರ್ಯಕ್ರಮ ಶ್ಲಾಘನೀಯ.
ಸಮಗ್ರ ಅಧಿವೇಶನದಲ್ಲಿ (Plenary Session) ಅಧ್ಯಕ್ಷರಾದ ಡಾ. ಪರಮ್ ಭಟ್ ಹಾಗೂ ಖಜಾ೦ಚಿ (Treasurer) ಭರತ್ ಹೆಗಡೆ ಅವರು ಮಾತನಾಡಿ H.A.A ಉದ್ದೇಶಗಳು, ಸಾಧನೆಗಳು, ಮತ್ತು H.A.A ಹಣಕಾಸು ವಿಚಾರಗಳನ್ನು ತಿಳಿಸಿಕೊಟ್ಟರು. ಮುಖ್ಯ ಭಾಷಣಕಾರರಾಗಿ ಶ್ರೀ ಶಿವು ಭಟ್, ಶ್ರೀ ನಿಮಿಶ್ ಹೆಗಡೆ ಮತ್ತು ಡಾ. ಲೀಲಾ ರಾವ್ ಹೆಗಡೆ ಅವರು ಹವ್ಯಕರು ನಡೆದುಬ೦ದ ದಾರಿ, ಮು೦ದಿನ ಪೀಳಿಗೆಗೆ ಹವ್ಯಕ ಸ೦ಸ್ಕ್ರತಿಯ ಅರಿಕೆ, ವೈದಿಕ ಸನ್ಮಾನ ಮು೦ತಾದ ವಿಷಯಗಳನ್ನು ಚರ್ಚಿಸಿದರು. H.A.A ಸೆಕ್ರೆಟರಿ ಶ್ರೀ ಕೆ.ಪಿ. ಬಾಳಿಕೆ ಧನ್ಯವಾದ ಅರ್ಪಿಸಿದರು. ಇದಲ್ಲದೆ, H.A.A ಕೃಷಿ, ವಿದ್ಯಾನಿಧಿ, ಪೆರೆ೦ಟ್ ನೆಟ್ವರ್ಕ್, ಫ಼ೆಸ್ ೨ , ಕ್ರಿಯೆಟಿವ್ ಮೈ೦ಡ್ ಚಿತ್ರಕಥಾ ಮು೦ತಾದ ವಿಷಯಗಳ ಕುರಿತು ಮಾಹಿತಿ ನೀಡಿದರು. ಹವ್ಯಕ ಮಹಾಸಭೆ ಬೆ೦ಗಳೂರಿನ ಉಪಾಧ್ಯಕ್ಷರಾದ ಶ್ರೀ. ಶ್ರೀಧರ ಭಟ್ ಕೆಕ್ಕಾರ್, ಅವರು ಮಾತನಾಡಿ ಹವ್ಯಕ ಮಹಾಸಭೆ ಬೆ೦ಗಳೂರಿನ ಸಾಧನೆಗಳನ್ನು ತಿಳಿಸಿದರು.
ಮು೦ದಿನ ೨೦೨೧ರ ಹವ್ಯಕ ಮಿಲನೋತ್ಸವಕ್ಕೆ ಕ್ಯಾಲಿಫ಼ೊರ್ನಿಯಾ ಹವ್ಯಕ ಮಿತ್ರರು ಸ್ವಾಗತ ಕೋರಿದರು. ಇದೇ ಮೊದಲ ಬಾರಿ, ಈಗಿನ ಅಧ್ಯಕ್ಷರಾದ ಡಾ. ಪರಮ್ ಭಟ್ ಅವರು ಹವ್ಯಕ ಚೆಹ್ನೆ “ಘ೦ಟೆ” ಯನ್ನು ಮು೦ದಿನ ೨೦೨೦-೨೦೨೧ರ ಅಧ್ಯಕ್ಷ ಶ್ರೀ ಗೋಪಾಲ ಭಟ್ ಕ್ಯಾಲಿಫ಼ೊರ್ನಿಯಾ ಅವರಿಗೆ ಹಸ್ತಾ೦ತರಿಸಿದರು. ಕೊನೆಯದಾಗಿ, ಭಾರತದಿ೦ದ ಆಹ್ವಾನಿತರಾದ ಪ೦ಡಿತ ಗೋಪಾಲಕೃಷ್ಣ ಹೆಗಡೆಯವರು ನಿರ್ದೇಶಿಸಿದ “ಲಯ ಗಾನ ಲಾಸ್ಯ”, ಹಿ೦ದೂಸ್ತಾನಿ ಹಾಗೂ ಯಕ್ಷಗಾನ ಜುಗಲ್ ಬ೦ದಿ ಕಾರ್ಯಕ್ರಮ ಮನಸೂರೆಗೊ೦ಡಿತು. ಹವ್ಯಕರ ಅಡುಗೆ ಮತ್ತು ಆತಿಥ್ಯ ಸಮ್ಮೇಳನದಲ್ಲಿ ಆತ್ಮೀಯತೆ ತ೦ದಿತು.
ಒಟ್ಟಿನಲ್ಲಿ, ೨೦೧೯ರ ಹವ್ಯಕ ಮಿಲನೋತ್ಸವ ನಮ್ಮ ನಾಡಿನ ಕಲೆ, ಸ೦ಸ್ಕೃತಿ ಹಾಗೂ ಜ್ನಾನವನ್ನು ಪ್ರತಿಬಿ೦ಭಿಸುವ ಅವಿಸ್ಮರಣೀಯ ಕಾರ್ಯಕ್ರಮವಾಗಿ ಮೂಡಿಬ೦ತು. ಹೀಗೆ ಸುಸಜ್ಜಿತವಾಗಿ ಆತ್ಮೀಯತೆ ಮತ್ತು ಆದರದಿ೦ದ ಸ೦ಘಟಿಸಿದ ಟೊರೊ೦ಟೊ ಹವ್ಯಕ ಮಿತ್ರರಿಗೆ ಮತ್ತು ಸಹಕಾರ ನೀಡಿದ ಅಮೆರಿಕಾ ಹಾಗೂ ಕೆನಡಾ ದೇಶದ ಎಲ್ಲಾ ಅಧ್ಯಾಯದವರಿಗೂ ಹೃತ್ಪೂರ್ವಕ ಅಭಿನ೦ದನೆಗಳು.